ಪಾರಂಪರಿಕ ತಿಳಿವಳಿಕೆಯ ಆಕರಗಳು
ಸಕಲ ವೈದ್ಯಸಂಹಿತ ಸಾರಾರ್ಣವ
  1. ಪುಸ್ತಕದ ಹೆಸರು :‘ಸಕಲ ವೈದ್ಯಸಂಹಿತ ಸಾರಾರ್ಣವ, ಇದನ್ನು ವೀರರಾಜೇಂದ್ರೋಕ್ತಿವಿಲಾಸ ಎಂದೂ ಕರೆಯುತ್ತಾರೆ.
  2. ಲೇಖಕನ ಹೆಸರು ಕಳಲೆ ವೀರರಾಜ
  3. ಕಾಲ : ಕ್ರಿ.ಶ. 1700
  4. ವಿಷಯ : ವೈದ್ಯಶಾಸ್ತ್ರ
  5. ಕಿರು ಪರಿಚಯ :ಇದು ಆಯುರ್ವೇದವನ್ನು ವಸ್ತುವಾಗಿ ಹೊಂದಿರುವ ಬಹು ದೊಡ್ಡ ಪುಸ್ತಕ.ಬಹು ಮಟ್ಟಿಗೆ ಜೀರ್ಣವಾಗಿರುವ ಅನೇಕ ಓಲೆಗರಿಯ ಮತ್ತು ಕಾಗದದ ಹಸ್ತಪ್ರತಿಗಳನ್ನು ಬಳಸಿಕೊಂಡು ಇದನ್ನು ಸಿದ್ಧಪಡಿಸಲಾಗಿದೆ. ಕಳಲೆ ವೀರರಾಜನು, ಚರಕ ಸಂಹಿತ,ಸುಶ್ರುತ ಸಂಹಿತ ಮುಂತಾದ ಪ್ರಸಿದ್ಧ ಸಂಸ್ಕೃತ ಆಯುರ್ವೇದದ ಗ್ರಂಥಗಳಿಂದ ಮಾತ್ರವಲ್ಲ, ಅನೇಕ ಜಾನಪದ ಪರಂಪರೆಗಳಿಂದಲೂ ಮಾಹಿತಿಯನ್ನು ಸಂಗ್ರಹಿಸಿದ್ದಾನೆ. ಸಂಸ್ಕೃತ, ಕನ್ನಡ ಮತ್ತು ತೆಲುಗು ಭಾಷೆಗಳ ಅನೇಕ ಪುಸ್ತಕಗಳು ಅವನ ಆಕರಗಳು. ಈ ಪುಸ್ತಕದಲ್ಲಿರುವ ತೆಲುಗು ಭಾಗಗಳ ಕನ್ನಡ ಅನುವಾದವನ್ನು ಬಿ.ಎಸ್.ಸಣ್ಣಯ್ಯನವರು ಒದಗಿಸಿದ್ದು, ಅದು 170 ಪುಟಗಳಷ್ಟು ದೀರ್ಘವಾಗಿದೆ. ಇಲ್ಲಿರುವ ವಿಷಯಗಳನ್ನು ಸಂಶೋಧಕರ ತಂಡವೇ ಸಂಗ್ರಹಿಸಿರುವಂತೆ ತೋರುತ್ತದೆ. ಸಣ್ಣಯ್ಯನವರು ಪ್ರಕಟಿಸಿರುವ ಆವೃತ್ತಿಯೂ ಅಪೂರ್ಣವಾದುದೇ. ಈಗ ಲಭ್ಯವಿರುವ ಸಮಗ್ರ ಹಸ್ತಪ್ರತಿಯು ಇನ್ನೂ ಪ್ರಕಟವಾಗಿಲ್ಲ. 
  1. ಪ್ರಕಟಣೆಯ ಇತಿಹಾಸ :

ಅ. 1932, (ಮೊದಲ ಸಂಪುಟ) ಸಂಪಾದಕರು: ಡಿ.ಶ್ರೀನಿವಾಸಾಚಾರ್ ಮತ್ತು ಡಿ.ಎಲ್. ನರಸಿಂಹಾಚಾರ್, ಪ್ರ. ಗೌರ್ನಮೆಂಟ್ ಓರಿಯೆಂಟಲ್ ಲೈಬ್ರರಿ, ಮೈಸೂರು.

ಆ. 1964, (ಮೊದಲ ಸಂಪುಟ) (ಪರಿಷ್ಕೃತ ಆವೃತ್ತಿ), ಅದೇ.

ಇ. 1984, (ಎರಡನೆಯ ಸಂಪುಟ), ಸಂಪಾದಕರು: ಬಿ.ಎಸ್. ಸಣ್ಣಯ್ಯ

  1. ಮುಂದಿನ ಓದು ಮತ್ತು ಲಿಂಕುಗಳು :ಇಲ್ಲ
  2. ಅನುವಾದಗಳು : ಇಲ್ಲ.

 

ಮುಖಪುಟ / ಪಾರಂಪರಿಕ ತಿಳಿವಳಿಕೆಯ ಆಕರಗಳು